
23rd April 2025
ವಡಗೇರಾ : ಸಮಾಜಮುಖಿ ಹಾಗೂ ಪರೋಪಕಾರಿ ಕೆಲಸಗಳಿಂದ ಮಾತ್ರ ಮನುಷ್ಯನ ಜನ್ಮ ಸಾರ್ಥಕ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕಿನ ಹೇಳಿದರು. ತಾಲೂಕಿನ ತುಮಕೂರು ಗ್ರಾಮದಲ್ಲಿ ಇಕ್ಷು ಫಾರ್ಮ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮುಖ್ಯಸ್ಥರಾದ ಚೇತನ್ ಕಂಪನಿ ವ್ಯವಸ್ಥಾಪಕರಾದ ರಾಜಶೇಖರ್ ಮತ್ತು ಕರವೇ ಜಿಲ್ಲಾ ಉಪಾಧ್ಯಕ್ಷರಾದ ಚೌಡಯ್ಯ ಬಾವೂರ ಸಹಕಾರದೊಂದಿಗೆ ಸ್ಥಾಪಿಸಿರುವ ನೀರಿನ ಅರವಟಿಗೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅತಿ ಹೆಚ್ಚು ಬಿಸಿಲಿನ ತಾಪವಿದ್ದು ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಚೌಡಯ್ಯ ಬಾವೂರ ಮಾತನಾಡಿ ಎಲ್ಲಾ ದಾನಕ್ಕಿಂತಲೂ ಕುಡಿಯುವ ನೀರಿನ ದಾನ ಅತ್ಯಂತ ಮಹತ್ವದ್ದಾಗಿದೆ ಆ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಿಂದ ಬರುವ ಸಾರ್ವಜನಿಕರಿಗೆ ನೀರಿನ ದಾಹ ತಣಿಸಲು ನಮ್ಮ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಎಲ್ಲರ ಸಹಕಾರದೊಂದಿಗೆ ಕಲ್ಪಿಸಿದ್ದೇವೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಶರಬಲಿಂಗ ಕಂಟೆಕಾಯಿ, ಮೌಲ ಕುರೆಸಿ, ಆದಮ್ ಕೋಳಿ, ವೆಂಕಟೇಶ್ ಮಾಚನೂರು , ಬಸವರೆಡ್ಡಿ ಗೌಡ ಅಭೀಶಾಳ,ರಾಚಪ್ಪ ಮಡಿವಾಳ, ಸಿದ್ದು ಪೂಜಾರಿ, ಶರಣು ಅಂಗಡಿ, ಸುರೇಶ್ ವಿಶ್ವಕರ್ಮ,ಐಲಿಂಗ, ಜಾಫರ್, ದೇವು ಮದನೂರ, ದಾವಲ್ ಸಾಬ್ ಮರಡಿ, ಗೌಸುದ್ದೀನ್, ಈಶಪ್ಪ ಪಟ್ಟೆದಾರ್, ಮರಿಲಿಂಗ, ಹಾಗೂ ತುಮಕೂರಿನ ಗ್ರಾಮಸ್ಥರು ಹಾಗೂ ಇನ್ನಿತರರು ಉಪಸ್ಥಿತರಿದ್ದರು ಉಪಸ್ಥಿತರಿದ್ದರು
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸೈಬರ್ ಅಪರಾಧಗಳ ತಡೆಗೆ ಸೂಕ್ತ ಕ್ರಮ ಸಹಾಯವಾಣಿ-೧೯೩೦ ಹಾಗೂ ವೆಬ್ಬಾಟ್ ಉನ್ನತೀಕರಣ
ಏ.24 ರಂದು ಡಾ.ರಾಜ್ ಕುಮಾರ್ ಜನ್ಮದಿನಾಚರಣೆ ಅಂಗವಾಗಿ ಕನ್ನಡ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ
ಅಲೆಮಾರಿ ಸಮುದಾಯ ಜನರಿಗೆ ಸರ್ಕಾರ ಸಾಕಷ್ಟು ಯೋಜನೆ ರೂಪಿಸಲಾಗಿದೆ ಜಾಗೃತಿ ಮೂಡಿಸಿ ಸವಲತ್ತು ಕಲ್ಪಿಸಲು ಅಧಿಕಾರಿಗಳು ಮುಂದಾಗಬೇಕು -ಪಲ್ಲವಿ ಜಿ.